      ಮೂಲದೊಡನೆ ಪರಿಶೀಲಿಸಿ
ಅನಿರ್ಬಂಧಿತ ರ್ಯಾಡಿಕಲ್

ಅಸಮ ಸಂಖ್ಯೆಯಲ್ಲಿ ಋಣ ವಿದ್ಯುತ್ಕಣಗಳನ್ನುಳ್ಳ (ಎಲೆಕ್ಟ್ರಾನ್) ಪರಮಾಣು ಅಥವಾ ಪರಮಾಣುಪುಂಜಗಳು (ಫ್ರೀ ರ್ಯಾಡಿಕಲ್ಸ್). ಅಸಮತೆಗೆ ಕಾರಣವಾಗಿರುವ ವಿದ್ಯುತ್ಕಣವನ್ನು ಪ್ರತ್ಯೇಕ ಚುಕ್ಕೆಯೊಂದರ ಮೂಲಕ ನಿರೂಪಿಸಲಾಗುತ್ತದೆ.  (ಒಟ್ಟು ಒಂಬತ್ತು ವಿದ್ಯುತ್ಕಣಗಳು) ಮತ್ತು  (ಒಟ್ಟು ನಲವತ್ತೊಂದು ವಿದ್ಯುತ್ಕಣಗಳು) ಪರಮಾಣು ಪುಂಜಗಳು ಅನಿರ್ಬಂಧ ರ್ಯಾಡಿಕಲ್‍ಗಳ ಉದಾಹರಣೆಗಳಾಗಿವೆ.

ಪರಮಾಣುಗಳ ನಡುವಣ ಪ್ರತಿಯೊಂದು ಬಂಧವೂ ಎರಡು ವಿದ್ಯುತ್ಕsಣಗಳು ಕೂಡಿ ಆಗಿದೆ. ಈ ರಾಸಾಯನಿಕಬಂಧಗಳನ್ನು ಛೇದಿಸಲು ಎರಡು ಹಾದಿಗಳಿವೆ- ಹೆಟೆರಾಲಿಸಿಸ್ ಮತ್ತು ಹೋಮಾಲಿಸಿಸ್. ಬಂಧದಲ್ಲಿ ಭಾಗವಹಿಸಿರುವ ವಿದ್ಯುತ್ಕಣಗಳೆರಡೂ ಒಂದು ಪರಮಾಣು ಅಥವಾ ಪರಮಾಣುಪುಂಜಕ್ಕೆ ಸೇರಿ ಬಂಧ ಛೇದವಾದಾಗ ಎರಡು ಅಯಾನುಗಳ ಸೃಷ್ಟಿಯಾಗಿ ಈ ಬಗೆಯ ಛೇದನ ಹೆಟೆರಾಲಿಸಿಸ್ ಎಂದೆನ್ನಿಸಿಕೊಳ್ಳುತ್ತದೆ. ಹೋಮಾಲಿಸಿಸ್‍ನಲ್ಲಿ ಬಂಧದ ವಿದ್ಯುತ್ಕಣಗಳ ಸಮಹಂಚಿಕೆಯಾಗಿ ಬೇರ್ಪಡುವ ಎರಡು ಭಾಗಗಳಿಗೂ ಒಂದೊಂದು ವಿದ್ಯುತ್ಕಣ ಸೇರಿ ಎರಡು ಅನಿರ್ಬಂಧ ರ್ಯಾಡಿಕಲ್‍ಗಳ ಸೃಷ್ಟಿಯಾಗುತ್ತದೆ.
	 		      ಃ Θ........ ಹೆಟೆರಾಲಿಸಿಸ್

 			        ........ ಹೋಮಾಲಿಸಿಸ್
ಬಹುಮಟ್ಟಿನ ರ್ಯಾಡಿಕಲ್‍ಗಳಿಗೆ ಅಧಿಕಕ್ರಿಯಾಶಕ್ತಿ ಇದೆ. ದುರ್ಬಲ (ಡೈಲ್ಯೂಟ್) ದ್ರಾವಣಗಳಲ್ಲಿ ಮಾತ್ರ ಅಂಥ ರ್ಯಾಡಿಕಲ್‍ಗಳು ಇರಲು ಸಾಧ್ಯ. ತನ್ನ ಅಕ್ಷದ ಮೇಲೆ ಆವರ್ತಿಸುತ್ತಿರುವ ಅಸಮವಿದ್ಯುತ್ಕಣಕ್ಕೆ ಅಯಸ್ಕಾಂತ ಶಕ್ತಿ ಇರುವುದರಿಂದ ಅಯಸ್ಕಾಂತ ವಲಯದಲ್ಲಿ ರ್ಯಾಡಿಕಲ್‍ಗಳನ್ನಿಟ್ಟಾಗ ಉಂಟಾಗುವ ಆಕರ್ಷಣೆಯ ದೆಸೆಯಿಂದ ತೂಕವ್ಯತ್ಯಾಸ ಕಂಡು ಬರುತ್ತದೆ. ಇದನ್ನು ಅಳತೆ ಮಾಡುವುದರಿಂದ ರ್ಯಾಡಿಕಲ್‍ಗಳ ಇರುವಿಕೆಯನ್ನು ಗುರುತಿಸಬಹುದು. ಈಗ ಸುಮಾರು 20 ವರ್ಷಗಳಿಂದ ಎಲೆಕ್ಟ್ರಾನ್ ಅನುಕಾಂತೀಯ ಅನುನಾದ (ಎಲೆಕ್ಟ್ರಾನ್ ಪ್ಯಾರಮ್ಯಾಗ್ನೆಟಿಕ್ ರೆಸೋನೆನ್ಸ್, ಇ.ಪಿ.ಆರ್.) ಅಥವಾ ಎಲೆಕ್ಟ್ರಾನ್ ಭ್ರಮಣ ಅನುನಾದ (ಎಲೆಕ್ಟ್ರಾನ್ ಸ್ಪಿನ್ ರೆಸೋನೆನ್ಸ್, ಇ.ಎಸ್.ಆರ್.) ಎಂಬ ಸುಧಾರಿಸಿದ ವಿಧಾನವನ್ನು ಅನಿರ್ಬಂಧ ರ್ಯಾಡಿಕಲ್‍ಗಳ ಇರುವಿಕೆಯನ್ನು ಗುರುತಿಸಲು ಉಪಯೋಗಿಸಲಾಗುತ್ತಿದೆ. ಹಲವು ಪ್ರತ್ಯೇಕ ಸಂದರ್ಭಗಳಲ್ಲಿ ರ್ಯಾಡಿಕಲ್‍ಗಳು ಮಾತೃ ಸಂಯುಕ್ತದಲ್ಲಿಲ್ಲದ ಬಣ್ಣಗಳನ್ನು ಪಡೆದಿರುವುದು ಕಂಡುಬಂದಿದೆ. ಈ ವಿಶಿಷ್ಟಗುಣವನ್ನು ಆ ಸಂದರ್ಭಗಳಲ್ಲಿ ರ್ಯಾಡಿಕಲ್‍ಗಳ ಇರುವಿಕೆಯನ್ನು ಕಂಡು ಹಿಡಿಯಲು ಉಪಯೋಗಿಸಬಹುದು. ಗೋಂಬರ್ಗ್ ಎಂಬ ವಿe್ಞÁನಿ ಟ್ರೈಫೀನೈಲ್ ಮೀಥೈಲ್ ರ್ಯಾಡಿಕಲ್‍ನ  ಇರುವಿಕೆಯನ್ನು ಕಂಡುಹಿಡಿದುದು ಹೀಗೆಯೇ. 
 
(ವರ್ಣರಹಿತ ಸಂಯುಕ್ತ) (ಹಳದಿ ಬಣ್ಣದ ರ್ಯಾಡಿಕಲ್)
ಇತರ ರ್ಯಾಡಿಕಲ್‍ಗಳನ್ನು ಕ್ರಿಯಾಮಿಶ್ರಣಗಳಿಗೆ (ರೀಆ್ಯಕ್ಷನ್ ಮಿಕ್ಸ್‍ಚರ್) ಸೇರಿಸಿದಾಗ, ರ್ಯಾಡಿಕಲ್‍ಗಳನ್ನು ಮಧ್ಯವರ್ತಿಗಳನ್ನಾಗುಳ್ಳ ರಾಸಾಯನಿಕಕ್ರಿಯೆಗಳ ವೇಗ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಹೊಸದಾಗಿ ಸೇರಿಸಿದ ರ್ಯಾಡಿಕಲ್‍ಗಳು ಮಿಶ್ರಣದಲ್ಲಿರುವ ಮಧ್ಯವರ್ತಿಗಳು ದೊರಕದಂತೆ ಮಾಡುವುದೇ ಈ ಕ್ರಿಯೆಯ ವೇಗ ಕಡಿಮೆಯಾಗಲು ಕಾರಣ. ರ್ಯಾಡಿಕಲ್‍ಗಳನ್ನು ಮಧ್ಯವರ್ತಿಗಳಾಗುಳ್ಳ ಸ್ಟೈರೀನ್ ಪಾಲಿಮರೈeóÉೀಷನ್ ಕ್ರಿಯೆಯನ್ನು ಡೈಫೀನೈಲ್ ಪಿಕ್ರೈಲ್ ಹೈಡ್ರಜಿûಲ್‍ನಂಥ (ಡಿ.ಪಿ.ಪಿ.ಎಚ್.) ರ್ಯಾಡಿಕಲ್‍ಗಳು ಪೂರ್ಣವಾಗಿ ಪ್ರತಿಬಂಧಿಸಬಲ್ಲುವು. ಅನಿರ್ಬಂಧ ರ್ಯಾಡಿಕಲ್‍ಗಳ ಈ ವಿಶಿಷ್ಟ ಗುಣ ಯಾವುದಾದರೊಂದು ಕ್ರಿಯೆಯಲ್ಲಿ ರ್ಯಾಡಿಕಲ್‍ಗಳು ಮಧ್ಯವರ್ತಿಗಳೇ ಅಲ್ಲವೇ ಎಂಬುದನ್ನು ಕಂಡುಹಿಡಿಯಲು ಸಹಾಯಕವಾಗಿದೆ.

ಅನಿರ್ಬಂಧ ರ್ಯಾಡಿಕಲ್‍ಗಳ ಸೃಷ್ಟಿ ಮೂರು ಬಗೆಗಳಲ್ಲಿ ಆಗಬಹುದು. 1. ಶಾಖದಿಂದ ಬಂಧಛೇದನ. 2. ಬೆಳಕಿನ ಅಥವಾ ಅಗೋಚರಕಿರಣಗಳಿಂದ ಬಂಧಛೇದನ. 3. ಏಕ ಋಣವಿದ್ಯುತ್ಕಣ ಉತ್ಕರ್ಷಣ, ಅಪಕರ್ಷಣ ವಿಧಿಗಳು (ಒನ್ ಎಲೆಕ್ಟ್ರಾನ್ ಆಕ್ಸಿಡೇಷನ್ ಆ್ಯಂಡ್ ರಿಡಕ್ಷನ್ ಪ್ರೊಸೆಸಸ್).

4000-6000 ಸೆಂ.ಗ್ರೇ. ಉಷ್ಣತೆಯವರೆಗೆ ಕಾಯಿಸುವುದರ ಮೂಲಕ ಅಣುಗಳಲ್ಲಿನ ಪರಮಾಣುಗಳ ನಡುವಣ ಬಂಧಗಳ ಛೇದನಕ್ಕೆ ಬೇಕಾಗುವ ಶಕ್ತಿಯನ್ನು ಒದಗಿಸಬಹುದು. ಆದರೆ ಹಲವು ಪ್ರತ್ಯೇಕ ಸಂಯುಕ್ತಗಳಲ್ಲಿ ದುರ್ಬಲ ಬಂಧಗಳಿದ್ದು, ಬಂಧ ಬೇಧ ಕೇವಲ 500- 1500 ಸೆ. ಉಷ್ಣತೆಯಲ್ಲಿಯೇ ಆಗಬಲ್ಲುದು. ಇಂಥ ಸಂಯುಕ್ತಗಳನ್ನು ರ್ಯಾಡಿಕಲ್ ಕ್ರಿಯೆಗಳಲ್ಲಿ ಆರಂಭಕಾರಿಗಳನ್ನಾಗಿ (ಇನಿಷಿಯಲ್ಸ್) ಉಪಯೋಗಿಸ ಬಹುದು. ಇಂಥ ಆರಂಭಕಾರಿಗಳಿಂದ ಉತ್ಪತ್ತಿಯಾದ ರ್ಯಾಡಿಕಲ್‍ಗಳು ಇತರ ಸಂಯುಕ್ತಗಳ ಅಣುಗಳಲ್ಲಿ ಬಂಧಛೇಧನವನ್ನು ಪ್ರಚೋದಿಸಿ, ಸಾಮಾನ್ಯ ಪರಿಸ್ಥಿತಿಯಲ್ಲಿ ಬೇಕಾಗುವ ಉಷ್ಣಾಂಶಕ್ಕಿಂತ  ಅತಿಕಡಿಮೆ ಉಷ್ಣಾಂಶದಲ್ಲಿಯೇ ಅನೇಕ ಬಗೆಯ ಅನಿರ್ಬಂಧ  ರ್ಯಾಡಿಕಲ್‍ಗಳ ಸೃಷ್ಟಿಯನ್ನು ಸಾಧಿಸಬಲ್ಲವು. ಸಾಮಾನ್ಯವಾಗಿ ಪರ್‍ಆಕ್ಸೈಡ್ ಮತ್ತು ಅಜೋ ಸಂಯುಕ್ತಗಳನ್ನು ಈ ಬಗೆಯ ಆರಂಭಕಾರಿಗಳಾಗಿ ಉಪಯೋಗಿಸಲಾಗುತ್ತದೆ. ಅಲ್ಲದೆ ಅವುಗಳಿಂದ ಆಗುವ  ರ್ಯಾಡಿಕಲ್ ಸೃಷ್ಟಿಯನ್ನು ಕೆಳಗೆ ತೋರಿಸಿರುವ ಸಮೀಕರಣಗಳಿಂದ ನಿದರ್ಶಿಸಬಹುದು:-
		   
  50ಲಿ-150ಲಿ
                  
     
(ಪರ್ ಆಕ್ಸೈಡ್)

      			
	ಅಥವಾ
		       

		       
     (ಅಜೋó ಸಂಯುಕ್ತ)
			
	 ಅಥವಾ
		 	
ಈ ರೀತಿ ಸೃಷ್ಟಿಯಾದ ರ್ಯಾಡಿಕಲ್‍ಗಳು ಇತರ ಅಣಿಗಳೊಡನೆ ರ್ಯಾಡಿಕಲ್ ಕ್ರಿಯೆಗಳಲ್ಲಿ ಭಾಗವಹಿಸಿ ಬೇರೆ ಬಗೆಯ ರ್ಯಾಡಿಕಲ್‍ಗಳನ್ನು ಸೃಷ್ಟಿಸಬಲ್ಲವು. ಹೀಗೆ ಒಂದಾದ ಮೇಲೊಂದರಂತೆ ರ್ಯಾಡಿಕಲ್‍ಗಳ ಸೃಷ್ಟಿಯನ್ನು ಪರಂಪರೆಯಾಗಿ ನಡೆಸಿಕೊಂಡು ಬರುವ ಕ್ರಿಯೆಗಳಿಗೆ ವ್ಯಾಪಕ್ರಿಯೆಗಳೆಂದು(ಪ್ರೊಪಗೇಷನ್ ರೀಆಕ್ಷನ್) ಹೆಸರು. ರ್ಯಾಡಿಕಲ್  ಕ್ರಿಯೆಗಳ ಅಂತ್ಯ ರ್ಯಾಡಿಕಲ್‍ಗಳೊಡನೆ ರ್ಯಾಡಿಕಲ್‍ಗಳು ಕೂಡಿ ಸ್ಥಿರ ಅಣುಗಳು ಸಂಯೋಗವಾದಾಗ ಆಗುತ್ತದೆ.ಇಂಥ ಅಂತ್ಯ ಕ್ರಿಯೆಗಳನ್ನು (ಟರ್ಮಿನೇಷನ್ ರೀಆಕ್ಷನ್) ಕೆಳಗಿನ ಸಮೀಕರಣದಿಂದ ನಿದರ್ಶಿಸಬಹುದು.

	
       	
	
	
ಈ ಬಗೆಯ ಅಂತ್ಯ ಕ್ರಿಯೆಗಳಿಂದ ರ್ಯಾಡಿಕಲ್‍ಗಳ ನಷ್ಟ ಸಂಭವಿಸಿದಾಗ ರ್ಯಾಡಿಕಲ್ ಕ್ರಿಯೆಗಳು ಪರಿಮಿತಿಗೊಂಡು ಕ್ರಿಯಾಂತ್ಯಕ್ಕೆ ದಾರಿಯಾಗುತ್ತವೆ. ವ್ಯಾಪಕ ಕ್ರಿಯೆಯೇ ಪ್ರಮುಖವಾಗುಳ್ಳ ಪರ್‍ಆಕ್ಸೈಡ್ ಮತ್ತು ಅಜೋ ಸಂಯುಕ್ತಗಳ ರಾಸಾಯನಿಕ ಕ್ರಿಯೆಗಳಲ್ಲಿ ಶಕ್ತಿ ಶಾಖರೂಪದಲ್ಲಿ ಬಿಡುಗಡೆಯಾಗುವುದರಿಂದ ಸ್ಫೋಟನೆಗಳಿಗೆ ಅವಕಾಶ ಉಂಟು. ಆದ್ದರಿಂದ ಈ ಬಗೆಯ ಸಂಯುಕ್ತಗಳನ್ನು ಉಪಯೋಗಿಸುವಾಗ ಜಾಗರೂಕತೆ ಅತ್ಯಾವಶ್ಯಕ. ಬಂದಛೇದಕ್ಕೆ ಬೇಕಾಗುವ ಶಕ್ತಿಯನ್ನು ಶಾಖರೂಪದಲ್ಲಿ ಮಾತ್ರವಲ್ಲದೆ ಬೆಳಕಿನ ಕಿರಣ ಮತ್ತು/ಅಥವಾ ಅಗೋಚರ ಕಿರಣಗಳ ಮೂಲಕವೂ ಒದಗಿಸಬಹುದು. ಇಂಥ ಶಕ್ತಿಯನ್ನು ನೇರವಾಗಿ ಅಥವಾ ಇತರ ಅಣುಗಳ ಮೂಲಕವಾಗಿ ಉಪಯೋೀಗಿಸಬಹುದು. ಈ ಬಗೆಯ ಶಕ್ತಿ ವರ್ಗಾವಣೆ ಮಾಡಿ ರ್ಯಾಡಿಕಲ್‍ಗಳನ್ನು ಸೃಷ್ಟಿಸಬಲ್ಲ ಸಾಮಥ್ರ್ಯ ಪಾದರಸಕ್ಕಿದೆ.

 + ಶಕ್ತಿ 	 (ಶಕ್ತಿಪೂರಿತ ಅಣು)
+ ಖ-ಊ	  + 

ಕ್ರಿಯಾಂತ್ಯದಲ್ಲಿ ಪಾದರಸದ ಅಣುವಿನಲ್ಲಿ ಯಾವ ಬದಲಾವಣೆಯೂ ಆಗದಿರುವುದರಿಂದ ಅದನ್ನು ಈ ಕ್ರಿಯೆಯಲ್ಲಿ ವೇಗವರ್ಧಕವೆಂದು ಭಾವಿಸಬಹುದು. ಏಕ ಋಣವಿದ್ಯುತ್ಕಣ ಉತ್ಕರ್ಚಣ ಅಪಕರ್ಷಣಗಳು ವಿದ್ಯುದ್ವಿಭಜನೆಗಳಲ್ಲೂ (ಎಲೆಕ್ಟೋಲಿಸಸ್) ಪರ್‍ಆಕ್ಸೈಡ್ ಮತ್ತು ಲೋಹಗಳನ್ನುಪಯೋಗಿಸುವ ಕ್ರಿಯೆಗಳಲ್ಲೂ ಸಾಧ್ಯ. ಈ ಬಗೆಯ ಹಲವು ಕ್ರಿಯೆಗಳ ನಿದರ್ಶನಗಳನ್ನು ಕೆಳಗೆ ತೋರಿಸಲಾಗಿದೆ. 
		-e Θ
		 
       ಉತ್ಕರ್ಷಣ
	Θ + 

ಚಿತ್ರ-1

ಅನಿರ್ಬಂಧ ರ್ಯಾಡಿಕಲ್‍ಗಳನ್ನು ಮಧ್ಯವರ್ತಿಗಳಾಗುಳ್ಳ ಕ್ರಿಯೆಗಳು ನಮಗೆ ಪರಿಚಿತವಾದ ಅನೇಕ ವಸ್ತುಗಳ ಸಂಯೋಜನೆಯಲ್ಲಿ ನಡೆಯುತ್ತವೆ. ಹ್ಯಾಲೋ ಹೈಡ್ರೋಕಾರ್ಬನ್‍ಗಳು ಮತ್ತು ಕೃತಕ ರಬ್ಬರ್. ಪಾಲಿಎಥಿಲೀನ್, ಪಾಲಿಸ್ಟೈರೀನ್, ಟೆಫ್ಲಾನ್, ಪಾಲಿವಿನೈಲ್‍ಗಳೇ ಮೊದಲಾದ ವಿವಿಧ ಬಗೆಯ ಪ್ಲಾಸ್ಟಿಕ್ ವಸ್ತುಗಳ ಅನೇಕ ಸಂಯೋಜನೆಗಳಲ್ಲಿ ಅನಿರ್ಬಂಧ ರ್ಯಾಡಿಕಲ್‍ಗಳ ಪಾತ್ರ ಪ್ರಮುಖವಾದುದು. ಪ್ರಕೃತಿಯಲ್ಲಿ ಬೆಳಕಿನ ನೆರವಿನಿಂದ ನಡೆಯುವ ಕ್ಲೋರೋಫಿಲ್ ಮೊದಲಾದ ಬಹು ಸಂಖ್ಯೆಯ ಕ್ಲಿಷ್ಟ ಸಂಯುಕ್ತಗಳ ಸಂಯೋಜನೆಗಳಲ್ಲಿ ಅನಿರ್ಬಂಧ ರ್ಯಾಡಿಕಲ್‍ಗಳು ಮಧ್ಯವರ್ತಿಗಳಾಗಿರುವುದು ತಿಳಿದು ಬಂದಿದೆ.

(ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ